ಬೆಂಗಳೂರು: ಕೇಬಲ್ ಗ್ರಾಹಕರೇ ಎಚ್ಚರ ನೀವು ಇದಕ್ಕಿಂತ ಹೆಚ್ಚಿನ ಹಣ ಪಾವತಿಸುವಂತಿಲ್ಲ…

0
116

ಬೆಂಗಳೂರು: ಕೇಬಲ್ ಬಿಲ್ ಮಾಫಿಯಾ ಅನ್ನೋದು ಸಿಕ್ಕಾಪಟ್ಟೆ ಬೆಳೆದುಕೊಂಡಿದೆ ಮತ್ತು ಕೇಬಲ್ ಬಿಲ್ ಎಷ್ಟು ಬೇಕೋ ಅಷ್ಟು ಅಂದ್ರೆ ೩೦೦ ರಿಂದ ೪೦೦ ರ ವರೆಗೆ ನಿಮಗೆ ಕೇಬಲ್ ಬಿಲ್ ಪಾವತಿ ಮಾಡಲು ಹೇಳುತ್ತಾರೆ ಆದ್ರೆ ನಿಜವಾಗಲೂ ನಿಮ್ಮದು ಅಷ್ಟೊಂದು ಬಿಲ್ ಬಂದಿರುವುದಿಲ್ಲ.

ಇಂತಹವ್ಯವಸ್ಥೆಯನ್ನು ಮಟ್ಟ ಹಾಕಲು ನಮ್ಮ ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ಒಂದು ಕಾನೂನನ್ನು ಜರಿ ಮಾಡಿದೆ ಏನು ಮತ್ತು ನೀವು ಎಷ್ಟು ಹಣ ಪಾವತಿಸಬೇಕು ಅನ್ನೋದು ಇಲ್ಲದೆ ನೋಡಿ.100 ಚಾನೆಲ್‌ ವೀಕ್ಷಿಸುವ ಸೌಲಭ್ಯ ನೀಡಿದಲ್ಲಿ 130 ರೂ. ಶುಲ್ಕ ವಿಧಿಸಬೇಕು. ಅದಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರಾಗಿದ್ದಾಗ ಜಿ. ಪರಮೇಶ್ವರ್‌ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದರು.ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿಆರ್‌ಎಐ) ಕೇಬಲ್‌ ಸಂಪರ್ಕಕ್ಕೆ ದರ ನಿಗದಿ ಮಾಡಿ ನಿರ್ಣಯ ಕೈಗೊಂಡಿದೆ. ಹಾಗಾಗಿ ಹೆಚ್ಚುವರಿ 25 ಚಾನೆಲ್‌ಗಳಿಗೆ ಹೆಚ್ಚುವರಿಯಾಗಿ 20 ರೂ, ಮಾತ್ರ ಶುಲ್ಕ ಪಡೆಯಬೇಕು ಎಂದಿದೆ. ಇದಕ್ಕಿಂತ ಹೆಚ್ಚು ಹಣ ಪಡೆಯುವ ಕೇಬಲ್‌ ಸಂಸ್ಥೆಗಳ ಬಗ್ಗೆ ನಿಗಾ ವಹಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.ಕೇಬಲ್‌ ನೆಟ್‌ವರ್ಕ್‌ ಉದ್ಯಮದಲ್ಲಿ ವರ್ಷಕ್ಕೆ ಅಂದಾಜು 5 ಸಾವಿರ ರೂ. ಕೋಟಿ ವ್ಯವಹಾರ ನಡೆಯುತ್ತಿದೆ. ಆದರೆ, ರಾಜ್ಯ ಸರ್ಕಾರಕ್ಕೆ ನಯಾ ಪೈಸೆ ತೆರಿಗೆ ಬರುತ್ತಿಲ್ಲ. ಕೇಬಲ್‌ ನೆಟ್‌ವರ್ಕ್‌ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಮತ್ತು ಈ ಉದ್ಯಮದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ಸಂಗ್ರಹಿಸಲು ಹೊಸ ಕಾಯ್ದೆ ತರುವುದಾಗಿ ಹೇಳಿದ್ದಾರೆ.ನೋಡಿ ಈ ರೀತಿಯಾಗಿ ರಾಜ್ಯ ಸರ್ಕಾರವೇ ಕೇಬಲ್ ಮಾಲೀಕರಿಗೆ ಎಚ್ಚರಿಕೆ ನೀಡಿದೆ ಹಾಗಾಗಿ ಮೇಲೆ ಹೇಳಿದಂತೆ ನಿಮ್ಮ ಬಿಲ್ ಪಾವತಿ ಮಾಡಿ ಹೆಚ್ಚಿಗೆ ಹಣ ಕೇಳಿದರೆ ಸರಿಯಾ ವಿಚಾರಾಸಿ ನಿಮ್ಮ ಬಿಲ್ ಪಾವತಿ ಮಾಡಿ.

LEAVE A REPLY

Please enter your comment!
Please enter your name here