ಪೆ.16ರಂದು ರಾಜ್ಯದ ಬಜೆಟ್ ಮಂಡನೆ…

0
263

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತ ಅವಧಿ ಯ ಕೊನೆಯ ಹಾಗೂ ಪ್ರಸಕ್ತ ಸಾಲಿನ ಆಯವ್ಯ ಯವನ್ನು ಇದೇ 16ರಂದು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.

ಬಜೆಟ್‍ಗೆ ಅಂತಿಮ ರೂಪು ನೀಡಲಾಗುತ್ತಿದೆ. ಮುಖ್ಯಮಂತ್ರಿಯಾಗಿ 6ನೇ ಹಾಗೂ ಹಣಕಾಸು ಸಚಿವರಾಗಿ 13ನೇ ಬಜೆಟನ್ನು ಸಿದ್ದ ರಾಮಯ್ಯ ಮಂಡಿಸ ಲಿದ್ದಾರೆ. ಚುನಾವಣಾ ವರ್ಷವೂ ಆಗಿರುವುದರಿಂದ ಜನಪ್ರಿಯ ಯೋಜನೆಗಳಿಗೆ ಹೆಚ್ಚು ಒತ್ತು ಕೊಡುವ ಸಾಧ್ಯತೆಗಳಿವೆ.

ಕಳೆದ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಿರುವ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಬಜೆಟ್‍ನಲ್ಲಿ ಮುಂದುವರೆಸಲಿದ್ದಾರೆ. ಕಳೆದ ಐದು ವರ್ಷಗಳ ಸಾಧನೆಗಳ ಜತೆಗೆ ಮತದಾರರನ್ನು ಓಲೈಸುವ ಸಲು ವಾಗಿ ಕೆಲವು ಆಕರ್ಷಕ ಮತ್ತು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here