ತೆಲುಗು ಚಿತ್ರನಟ ಪವನ್​ ಕಲ್ಯಾಣ್​ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆತರಲು ಜೆಡಿಎಸ್ ಪ್ರಯತ್ನ… 

0
44

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಚುರುಕುಗೊಂಡಿದ್ದು, ಪ್ರಚಾರ ಕಾರ್ಯಕ್ಕೆ ಭರ್ಜರಿ ಸಿದ್ಧತೆ ಆರಂಭಿಸಿವೆ. ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿರುವ ಜೆಡಿಎಸ್​ ಪ್ರಚಾರಕ್ಕಾಗಿ ಜನಸೇನಾ ಪಕ್ಷದ ನಾಯಕ, ತೆಲುಗು ಚಿತ್ರನಟ ಪವನ್​ ಕಲ್ಯಾಣ್​ ಅವರನ್ನು ಕರೆತರಲು ಪ್ರಯತ್ನಿಸುತ್ತಿದೆ. 

ಜೆಡಿಎಸ್​ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪವನ್​ ಕಲ್ಯಾಣ್​ ಅವರನ್ನು ಪ್ರಚಾರಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ.

ತೆಲುಗು ಭಾಷೆ ಪ್ರಭಾವ ಹೆಚ್ಚಾಗಿರುವ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪವನ್​ ಕಲ್ಯಾಣ್​ ಅವರ ಮೂಲಕ ಪ್ರಚಾರ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಪವನ್​ ಕಲ್ಯಾಣ್​ ಅವರನ್ನ ಕರೆತರುವ ಜವಾಬ್ದಾರಿಯನ್ನು ಕುಮಾರಸ್ವಾಮಿ ಅವರು ಪರಿಷತ್​ ಸದಸ್ಯ ಸಿ. ಮನೋಹರ್​ ಅವರಿಗೆ ವಹಿಸಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್,​ ಪ್ರಚಾರಕ್ಕಾಗಿ ಪವನ್​ ಕಲ್ಯಾಣ್​ ಸಹೋದರ ಚಿರಂಜೀವಿಯನ್ನು ಕರೆತರಲು ಪ್ರಯತ್ನಿಸುತ್ತಿದೆ. ಚಿರಂಜೀವಿಯನ್ನು ಪ್ರಚಾರಕ್ಕೆ ಆಗಮಿಸುವಂತೆ ಒಪ್ಪಿಸುವ ಜವಾಬ್ದಾರಿಯನ್ನು ಶಾಸಕ ಅಂಬರೀಷ್​ ಅವರ ಹೆಗಲಿಗೆ ಹೊರಿಸಿದ್ದಾರೆ.

LEAVE A REPLY

Please enter your comment!
Please enter your name here