ಕಣ್ಣಿಗೆ ಕಣ್ಣು ಎಂದಾದರೇ ವಿಶ್ವವೇ ಅಂಧ, ದೀಪಕ್ ಹತ್ಯೆಗೆ ಬಶೀರ್ ಸಾವು ಉತ್ತರವಲ್ಲ: ಪ್ರತಾಪ್ ಸಿಂಹ ಟ್ವೀಟ್

0
55

ರಾಜ್ಯದಲ್ಲಿ ಶಾಂತಿ ಮರು ಸ್ಥಾಪನೆಗೆ ಕಾಂಗ್ರೆಸ್ ಸರ್ಕಾರಕ್ಕೆ ಉತ್ಸಾಹವಿಲ್ಲ, ಧಾರ್ಮಿಕ ಸೌಹಾರ್ಧ ಸಭೆ ನಡೆಸುವ ಸಮಯ ಬಂದಿದೆ

ಬೆಂಗಳೂರು: ಮಂಗಳೂರಿನಲ್ಲಿ ಭೀಕರವಾಗಿ ಹಲ್ಲೆಗೊಳಗಾಗಿ ಭಾನುವಾರ ಎಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಶೀರ್ ಸಾವಿಗೆ ಸಂಬಂಧಿಸಿದಂತೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು,  ದೀಪಕ್ ಸಾವಿಗೆ ಬಶೀರ್ ಹತ್ಯೆ ಉತ್ತರವಲ್ಲ ಎಂದು ಹೇಳಿದ್ದಾರೆ.
ಬಶೀರ್ ಸಾವಿನ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಅವರು, ಕಣ್ಣಿಗೆ ಕಣ್ಣು ಎಂದಾದರೆ ಇಡೀ ಪ್ರಪಂಚವೇ ಅಂಧವಾಗುತ್ತದೆ. ದೀಪಕ್ ಹತ್ಯೆಗೆ ಬಶೀರ್  ಸಾವು ಉತ್ತರವಲ್ಲ. ರಾಜ್ಯದಲ್ಲಿ ಶಾಂತಿ ಮರು ಸ್ಥಾಪನೆಗೆ ಕಾಂಗ್ರೆಸ್ ಸರ್ಕಾರಕ್ಕೆ ಉತ್ಸಾಹವಿಲ್ಲ. ಹೀಗಾಗಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಸೌಹಾರ್ಧ ಸಭೆ ನಡೆಸುವ ಸಮಯ ಬಂದಿದೆ ಎಂದು ಪ್ರತಾಪ್ ಸಿಂಹ  ಟ್ವೀಟ್ ಮಾಡಿದ್ದಾರೆ.
ಇನ್ನು ಕಳೆದ ಜನವರಿ 3 ರಂದು ಮಂಗಳೂರಿನ ಕುಲೂರು ಸಮೀಪ ಕೊಟ್ಟಾರ ಚೌಕಿ ಬಳಿ ಅಪಚಿತ ವ್ಯಕ್ತಿಗಳು ಬಶೀರ್ ಅವರ ಮೇಲೆ ಹಲ್ಲೆ ಮಾಡಿದ್ದರು. ಚಾಕು, ತಲ್ವಾರ್ ಗಳಿಂದ ಬಶೀರ್ ಮೇಲೆ ಹಲ್ಲೆ ಮಾಡಿ ದುಷ್ಕರ್ಮಿಗಳು  ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಬಶೀರ್ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಬಶೀರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದೇ ಪ್ರಕರಣ ಸಂಬಂಧ  ಮಂಗಳೂರು ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಈ ಹಿಂದೆ ನಾಲ್ಕು ಜನರನ್ನು ಬಂಧಿಸಿದ್ದರು. ಈ ನಾಲ್ವರು ಮತೀಯ ಗಲಭೆಗಳಲ್ಲಿ ಈ ಹಿಂದೆ ಭಾಗಿಯಾಗಿದ್ದರು ಎಂಬ ಮಾಹಿತಿ ದೊರೆತಿದೆ.

LEAVE A REPLY

Please enter your comment!
Please enter your name here